Home / Events / ರೇಡಿಯೋ ಸಾರಂಗ್: ಬಲಿಪ ನಾರಾಯಣ ಭಾಗವತರ ಜೊತೆ ಹೃದಯರಾಗ

ರೇಡಿಯೋ ಸಾರಂಗ್: ಬಲಿಪ ನಾರಾಯಣ ಭಾಗವತರ ಜೊತೆ ಹೃದಯರಾಗ

ರೇಡಿಯೋ ಸಾರಂಗ್: ಬಲಿಪ ನಾರಾಯಣ ಭಾಗವತರ ಜೊತೆ ಹೃದಯರಾಗ

ಸಮುದಾಯ ಬಾನುಲಿ ರೇಡಿಯೋ ಸಾರಂಗ್ ಹೃದಯರಾಗ ಕಾರ್ಯಕ್ರಮದ ಅತಿಥಿಯಾಗಿ ಇತ್ತೀಚಿಗೆ ಹಿರಿಯ ಯಕ್ಷಗಾನ ಕಲಾವಿದ ಬಲಿಪ ನಾರಾಯಣಭಾಗವತರು ಪಾಲ್ಗೊಂಡರು. ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅವರ ಯಕ್ಷ ಬದುಕಿನ ಅನಾವರಣ ಮಾಡುವುದರ ಜೊತೆಗೆ ಶೋತ್ರುಗಳಿಗೂ ಬಲಿಪರೊಂದಿಗೆಮಾತನಾಡುವ ಅವಕಾಶ ಸಿಕ್ಕಿತು.

ಆಧುನಿಕ ಯಕ್ಷಗಾನ ಬೆಳವಣಿಗೆಯ ಕುರಿತು ಮಾತಾಡುತ್ತಾ ಬಲಿಪರು, ಇವತ್ತು ಯಕ್ಷಗಾನದಲ್ಲಿ ಸಾಕಷ್ಟು ಮಾರ್ಪಾಡುಗಳು ಆಗಿವೆ. ಇವು ಸೂಕ್ತವೋ ಅಲ್ಲವೋ ಎಂದು ತೀರ್ಪು ನೀಡುವುದು ಅಸಾಧ್ಯ. ಆದಾಗ್ಯೂ ಮೂಲ ಕಲೆಗೆ ದ್ರೋಹ ಬಗೆಯದ ಹಾಗೆ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವುದು ಅಗತ್ಯ ಎಂದರು.

ರೇಡಿಯೋ ಸಾರಂಗ್ ನಲ್ಲಿ   ವರ್ಷದ  365 ದಿನ  ಕೂಡ ಯಕ್ಷಗಾನ ಪ್ರಸಾರವಾಗುತ್ತದೆ ಎಂಬ ವಿಷಯವನ್ನು ತಿಳಿದು ಬಲಿಪರು ಸಂತೋಷ ವ್ಯಕ್ತಪಡಿಸಿದರು. “ಪ್ರಾದೇಶಿಕವಾಗಿ ಬೆಳೆದು ವಿಶ್ವಮಾನ್ಯತೆ ಪಡೆದ ಇಂಥ ವಿಶಿಷ್ಟ ಕಲೆಯನ್ನು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರದು,” ಎಂದರು. ಕಾರ್ಯಕ್ರಮದ ನಂತರಸಾರಂಗ್ನ ಪರವಾಗಿ ಬಲಿಪರನ್ನು ಸನ್ಮಾನಿಸಲಾಯಿತು. ಈ ಸಂಧರ್ಭ ಸಂಸ್ಥೆಯ ನಿರ್ದೇಶಕರಾದ ಡಾ. ಮೆಲ್ವಿನ್ ಪಿಂಟೋ  ಎಸ್.ಜೆ. ಹಾಗೂ ಸಿಬ್ಬಂದಿಉಪಸ್ಥಿತರಿದ್ದರು.